Saturday, December 20, 2008

ಕೃಷಿ ಭೂಮಿ ಮಾರಾಟಕ್ಕಿದೆ!!!

ಕೃಷಿಯಲ್ಲಿ ಏನೇನೂ ಸುಖವಿಲ್ಲ ಎಂಬ ಮಾತು ಎಲ್ಲಿ ಹೋದರೂ ಬಿಡದು. ಕೃಷಿಕರನ್ನು ಕಾಡುವಷ್ಟು ಸಮಸ್ಯೆ ಬೇರೆ ಯಾರನ್ನೂ ಕಾಡದು...ಹಾಗಾಗಿ ಇದ್ದ ಜಾಗವನ್ನು ಮಾರಾಟ ಮಾಡಿ ನಗರಕ್ಕೆ ಹೋಗೋಣ ಎನ್ನುವುದು ಹಳ್ಳಿಗರದ್ದೂ ಯೋಚನೆ...ಇತ್ತೀಚೆಗೆ ಪಿರಿಯಪಟ್ಟಣ ಸಮೀಪ ಹೋಗುತ್ತಿದ್ದಾಗ ಹಸಿರು ಭೂಮಿಯೊಂದರಲ್ಲಿ ಕೆಂಪು ಅಕ್ಷರದಲ್ಲಿ ಹಾಕಿದ್ದ ಈ ಫಲಕ ಯಾಕೋ ಬಹಳ ನೋವು ತಂದಿತು.

Saturday, November 22, 2008

ಒಂದು ಸಂಜೆ ಕಡಲತೀರ ಯಾನ








ಕಡಲತೀರಗಳೆಂದರೆ ಸದಾ ನನಗೆ ಆಕರ್ಷಣೆ. ಸುಮ್ಮನೆ ನಮ್ಮೂರ ಬೀಚುಗಳಿಗೆ ಹೋಗಿ ಸಂಜೆಯಾಗುತ್ತಲೇ ಅವುಗಳು ತೆರೆದುಕೊಳ್ಳುವ ಚಟುವಟಿಕೆ ಗಮನಿಸುತ್ತಿದ್ದರೆ ಎಂತಹ ಒತ್ತಡವೂ ದೂರವಾಗಲೇಬೇಕು...ಮೊನ್ನೆ ನಮ್ಮೂರ ಸುರತ್ಕಲ್ ಬೀಚಿಗೆ ಹೋಗಿದ್ದೆ. ಹೆಗಲಲ್ಲಿ ಕ್ಯಾಮೆರಾ ಕೂಡಾ ಇತ್ತು. ಮೋಡ ಕವಿದಿದ್ದ ಕಾರಣ ಯಾವ ಫೋಟೋ ಸಿಗದೆಂಬ ಗ್ಯಾರಂಟಿಯಿತ್ತು. ಆದರೂ ಸೂರ್ಯ ಇನ್ನೇನು ಕಡಲಿಗೆ ಜೊಂಯ್ಯೆಂದು ಮುಳುಗಬೇಕು ಎಂದಿರುವಾಗಲೇ ಆಗಸಕ್ಕೊಂದು ವಿಚಿತ್ರ ಬಣ್ಣ ಬಂತು. ಮುಂದೆ ಕೆಲ ಸರಕಿನ ಹಡಗುಗಳು ಸಾಗುತ್ತಿದ್ದವು. ಕ್ಯಾಮೆರಾ ಲೆನ್ಸ್ ಪೂರ್ತಿ ಟೆಲಿಫೋಟೋ ಮೋಡ್‌ಗೆ ಇರಿಸಿ ಒಂದಿಷ್ಟು ಕ್ಲಿಕ್ಕಿಸಿದೆ. ಫಲಿತಾಂಶ ನಿಮ್ಮ ಮುಂದಿದೆ(ಇಲ್ಲಿ ಸಿಕ್ಕ ವರ್ಣಗಳು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿದ್ದಲ್ಲ. ಒರಿಜಿನಲ್)

Thursday, November 6, 2008

ಗಿಳಿವಿಂಡಿನ ಜಂಭದ ಸದಸ್ಯರು








ಹಕ್ಕಿಗಳ ಫೋಟೋ ತೆಗೆಯುವಲ್ಲಿ ನಾನು ಎಡವಿದ್ದೇ ಜಾಸ್ತಿ...ಹಕ್ಕಿಗಳ ಚೆನ್ನಾದ ಫೋಟೋ ತೆಗೆಯುವುದಕ್ಕೆ ಎಸ್‌ಎಲ್‌ಆರ್‍ ಕ್ಯಾಮೆರಾ ಜತೆಗೆ ಕನಿಷ್ಠ ೩೦೦ ಎಂ.ಎಂ ಟೆಲಿಫೋಟೋ ಲೆನ್ಸ್ ಅತಿ ಅಗತ್ಯ. ನನ್ನ ಬಳಿ ಇರುವುದು ಪ್ರೊಫೆಷನಲ್ ಕ್ಯಾಮೆರಾ ಅಲ್ಲ. ೧೨ ಎಕ್ಸ್ ಝೂಮ್ ಲೆನ್ಸ್‌ ಅದರಲ್ಲಿದೆ, ಆದರೂ ಎಸ್‌ಎಲ್‌ಆರ್‍ ಲೆನ್ಸ್‌ನಷ್ಟು ಸ್ಪಷ್ಟವಾಗಿ ಬಿಂಬ ಮೂಡುವುದಿಲ್ಲ.
ಇರಲಿ...ಹಾಗಿದ್ದರೂ ನಾನು ಸ್ವಲ್ಪವಾದರೂ ಖುಷಿಪಟ್ಟಿರುವ ಕೆಲ ಫೋಟೋಗಳು ಇಲ್ಲಿವೆ.
ಪೈರು ತಿನ್ನಲು ಆಗಮಿಸಿದ್ದ ಗಿಳಿವಿಂಡಿನ ಕೆಲಸದಸ್ಯರು ಸಿಕ್ಕಿದ್ದು ಮಡಿಕೇರಿ ಬಳಿಯ ಸಿದ್ದಾಪುರಕ್ಕೆ ಹೋಗಿದ್ದಾಗ. ..

Wednesday, October 15, 2008

ಕನ್ನಡದ ಬಣ್ಣ

ಕರ್ನಾಟಕವೆಂದರೆ ವರ್ಣಮಯ, ಯಾವುದೋ ಬಸ್ಸಲ್ಲಿ ಪ್ರಯಾಣಿಸುವಾಗ ಕನ್ನಡಾಂಬೆಯಂತೇ ಕಂಡುಬಂದ ಈ ಮಹಿಳೆ ಗಮನ ಸೆಳೆದಳು!

Saturday, September 6, 2008

ಮತ್ಸ್ಯ ಕುತೂಹಲ



ದೋಣಿಗಳಲ್ಲಿ ತೆರಳಿ ಮೀನುಗಾರಿಕೆ ನಡೆಸುವವರು ಕೆಲವರಾದರೆ ಹೀಗೇ ಮನೆ ಸಮೀಪ ಅದರಲ್ಲೂ ಕಡಲು ಮುನಿದಿರುವಾಗ ಸಪುರದ ನೂಲಿಗೆ ಹುಕ್ ಬಳಸಿ ಮೀನು ಹಿಡಿಯುವವರು ಹಲವರು. ಮಂಗಳೂರಿನ ಸಸಿಹಿತ್ಲು ಸಮೀಪ ನಂದಿನಿ ನದಿ ಕಡಲಿಗೆ ಸೇರುವಲ್ಲಿ ಹೀಗೇ ಮೀನುಗಾರನೊಬ್ಬ ಏಕಾಂಗಿಯಾಗಿ ಕಂಡುಬಂದಾಗ.....ಗಾಳಕ್ಕೆ ಸಿಕ್ಕ ಮೀನು ಹೇಗಿರಬಹುದು ಎಂಬ ಕುತೂಹಲ ನಮ್ಮಂತೆಯೇ ಇವರಿಗೂ ಇರಬಹುದೇನೋ !

Tuesday, August 26, 2008

ಮಿಡತೆ ಗುಲಾಬಿ

ಕೆಂಗುಲಾಬಿಯ ಚೆಲುವಿಗೆ ಈ ಮಿಡತೆ ಮಾರು ಹೋದಂತಿದೆ. ಮೋಡಮುಸುಕಿದ ವಾತಾವರಣದಿಂದ ಚಿತ್ರ ತಾಂತ್ರಿಕ ದೃಷ್ಟಿಯಿಂದ ಅಷ್ಟು ಚೆನ್ನಾಗಿ ಬಂದಿಲ್ಲ...ಆದರೆ ಪ್ರಕೃತಿಯಲ್ಲಿನ ವಿವಿಧ ಹಸಿರು ವರ್ಣವೈವಿಧ್ಯದೊಂದಿಗೆ ಈ ಮಿಡತೆಯ ವರ್ಣ ಮ್ಯಾಚಿಂಗ್ ಆಗುವಂತೆ ಕಂಡುಬಂತು

Wednesday, August 13, 2008

ನೀಲಿ ಮಳೆ!


ಇತ್ತೀಚೆಗೆ ಬೆಳಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಯಾವುದೋ ಸ್ಟೇಷನ್‌ನಲ್ಲಿ ರೈಲು ನಿಂತಿತ್ತು. ಮಳೆ ಬರುತ್ತಿದ್ದರಿಂದ ಕಿಟಿಕಿಯಲ್ಲಿ ನೀರಿನ ಹನಿ. ಹಿನ್ನೆಲೆಯಲ್ಲಿ ಇನ್ನೊಂದು ರೈಲಿನ ಗಾಢ ನೀಲಿ ವರ್ಣ ಆಕರ್ಷಕವಾಗಿ ಕಂಡುಬಂತು. ಆಗ ಕ್ಲಿಕ್ಕಿಸಿದ ಫೋಟೋ ನಿಮ್ಮ ಮುಂದಿದೆ. ನಿಮಗೆ ಹೇಗನಿಸಿತು?

Wednesday, August 6, 2008

ಮಗು - ನಗು



ಮಕ್ಕಳೆಂದರೆ ಹೇಗಿದ್ರೂ ಚೆಂದ. ಇಲ್ಲಿರೋನು ನನ್ನ ಚಿಕ್ಕಪ್ಪನ ಮಗ ಆಗಮ. ಕ್ಯಾಮೆರಾ ನೋಡಿದ್ರೆ ಸಿಟ್ಟು, ಅಳು ಎರಡೂ ಬರುತ್ತೆ. ಅವನಿಗೆ ಗೊತ್ತಾಗದ ಹಾಗೆ ತೆಗೆದ ಎರಡು ಕ್ಷಣಗಳು ಇಲ್ಲಿವೆ