
ಕೃಷಿಯಲ್ಲಿ ಏನೇನೂ ಸುಖವಿಲ್ಲ ಎಂಬ ಮಾತು ಎಲ್ಲಿ ಹೋದರೂ ಬಿಡದು. ಕೃಷಿಕರನ್ನು ಕಾಡುವಷ್ಟು ಸಮಸ್ಯೆ ಬೇರೆ ಯಾರನ್ನೂ ಕಾಡದು...ಹಾಗಾಗಿ ಇದ್ದ ಜಾಗವನ್ನು ಮಾರಾಟ ಮಾಡಿ ನಗರಕ್ಕೆ ಹೋಗೋಣ ಎನ್ನುವುದು ಹಳ್ಳಿಗರದ್ದೂ ಯೋಚನೆ...ಇತ್ತೀಚೆಗೆ ಪಿರಿಯಪಟ್ಟಣ ಸಮೀಪ ಹೋಗುತ್ತಿದ್ದಾಗ ಹಸಿರು ಭೂಮಿಯೊಂದರಲ್ಲಿ ಕೆಂಪು ಅಕ್ಷರದಲ್ಲಿ ಹಾಕಿದ್ದ ಈ ಫಲಕ ಯಾಕೋ ಬಹಳ ನೋವು ತಂದಿತು.
4 comments:
ವೇಣು ಸಾರ್,
ನಿಮ್ಮ ನೋವು ನನ್ನದು ಕೂಡ.!
ನಿಮ್ಮ ನೋವಿಗಿಂತ ಕೃಷಿಕರ ನೋವು ಬಹಳ ದೊಡ್ಡದು.ತಿಂಗಳುಗಟ್ಟಲೆ ,ನೀರು,ಗೋಬ್ಬರ ಹಾಕಿ ಕೃಷಿಮಾಡಿ ಗ್ರಾಹಕನಿಗೆ ಕೆ,ಜಿ.ಗೆ 2.50 ರೂಪಾಯಿಯಂತೆ ಮೂಲಂಗಿ ಲಭ್ಯವಾಗುತ್ತದೆ ಎಂದರೆ (ಡೆಲ್ಲಿಯಲ್ಲಿ)ಕೃಷಿಕನಿಗೆ ಎಷ್ಟು ಸಿಗಬಹುದು?ಅದಕ್ಕಿಂತ ಇವತ್ತು ಭೂಮಿ ಮಾರಾಟಮಾಡಿ ಬಂದ ಹಣದಿಂದ ಮನೆಯಲ್ಲಿ ನಿದ್ದೆಮಾಡಿ ಜೀವನ ವ್ಯಯಿಸುವುದು ಉತ್ತಮ ಅಂತ ಕೃಷಿಕನಿಗೆ ಅನಿಸದೆ ಇರುತ್ತದೆಯೇ?
ವೇಣು,
ನಿಮ್ಮ ಹಾಗೆ ಈ ಚಿತ್ರ ನೋಡಿ ನನಗೂ ಸಂಕಟವಾಯಿತು.
ಹಸಿರು ಭೂಮಿಯನ್ನು ಮಾರಲು ಇಟ್ಟ ಕೆಂಪು ಅಕ್ಷರಗಳು!
ಸಾವಿರ ಶಬ್ದಗಳು ಮಾತನಾಡದ್ದನ್ನು ನಿಮ್ಮ ಇದೊಂದು ಫೋಟೋ ಮಾತನಾಡುತ್ತದೆ.
ನಿಮ್ಮ ಫೋಟೋ ಬ್ಲಾಗ್ ಒಪ್ಪ ಓರಣವಾಗಿ ಕಣ್ಣಿಗೆ ಮುದ ನೀಡುತ್ತದೆ.
ಅಯ್ಯೋ ದೇವ್ರೇ..ಎಷ್ಟೊಳ್ಳೆ ಭೂಮಿ..ಹಸಿರು ಹಸಿರು. ಈಗ ಮಾರಿ ನಗರಕ್ಕೆ ಬಂದ್ರೆ ಗಂಟು ಮೂಟೆ ಕಟ್ಟಿಕೊಂಡು ವಾಪಾಸು ಹೋಗಬೇಕಷ್ಟೇ.
-ಚಿತ್ರಾ
Post a Comment