Monday, January 12, 2009

ಮುಖ ಬ್ಲರ್‍ ಆದರೇನು!!

ಮೊನ್ನೆ ಮೊನ್ನೆ ಕಾಲೇಜಿಗೆ ರಜೆಯಾದ್ದರಿಂದ ತಂಗಿ, ಅತ್ತಿಗೆ ಮನೆಗೆ ಬಂದಿದ್ರು...ಮನೆಗೆ ಬಂದವರಿಗೆ ಸುರತ್ಕಲ್ ಕಡಲತೀರ ನೋಡಲೇಬೇಕು! ಹಾಗೆ ಕಡಲಮುಂದೆ ಕುಂತಿದ್ದಾಗ ಫೋಟೋ ತೆಗೆಯುತ್ತಾ ಇದ್ದೆ. ಮನೆಯಲ್ಲಿ ಕಂಪ್ಯೂಟರಿಗೆ ಹಾಕಿದಾಗ ಈ ಫೋಟೋ ಗಮನ ಸೆಳೆಯಿತು. ಹಿಂದಿನ ಮುಖದ ಬದಲು ಫೋರ್‌ಗ್ರೌಂಡಲ್ಲಿರುವ ತಲೆಕೂದಲಿಗೆ ಲೆನ್ಸ್ ಫೋಕಸ್ ಆಗಿತ್ತು ಹಿಂದೆ ಬ್ಲರ್‍ ಆದ ಮುಖ...ವಿಶೇಷ ಚಿತ್ರವೇನೂ ಅಲ್ಲ, ಆದರೂ ಇಂಟರೆಸ್ಟಿಂಗ್ ಇರಬಹುದೇನೋ ಅಂತ ಹಾಕಿದ್ದೇನೆ.

5 comments:

shivu.k said...

ವೇಣು ಆನಂದ್,
ನೀವು ತೆಗೆದ ಫೋಟೊ ಅಚಾನಕ್ಕಾಗಿ ಫೋಕಸ್ ಆಗಿಲ್ಲ...ಬಹುಶಃ ಫೋಕಸ್ ಆಗಿದ್ದರೆ ಅದು ಬಲು ಚೆನ್ನವಿರುತ್ತಿದ್ದೇನೋ.....ಅಲ್ಲವೇ....ಇದು ನನಗನ್ನಿಸಿದ್ದು...

Ashok Uchangi said...

ಇಂಟರೆಸ್ಟಿಂಗ್ ಆಗಿದೆ!
ಕಾರಣ ಫೋರ್ ಗ್ರೌಂಡ್ ನಲ್ಲಿನ ಕೇಸರಿ ವೇಲಿನ ಮೇಲೆ ಬೆಳಕಿನ ನರ್ತನ ಮೊದಲು ನೋಡುವ ಕಣ್ಣು ನಂತರ ಹಿಂದಿನ ಮುಖದ ಕಡೆಗೆ ಸಾಗುತ್ತದೆ.
ಓಕೆ!
ಡೆಪ್ತ್ ಆಫ್ ಫೀಲ್ಡ್ ಕೊರತೆ ಬ್ಲರ್‍ ಆಗಲು ಕಾರಣ್ವಾಗಿದೆ ಅಲ್ಲವೇ?
ಅಶೋಕ
http://mysoremallige01.blogspot.com/

VENU VINOD said...

ಶಿವು,
ಕರೆಕ್ಟ್ ಅಚಾನಕ್ ಆಗಿ ಫೋಕಸ್ ಆಗಿಲ್ಲ, ನನ್ನ ಪ್ರಕಾರ ಫೋಕಸ್ ಆಗಿದ್ರೆ ಅದು ಶಾರ್ಪ್ ಆಗಿರುವ ಒಂದು ಸಾಮಾನ್ಯ ಚಿತ್ರವಾಗಿರುತ್ತಿತ್ತು..ಅಶೋಕ್ ಅವರು ಇಲ್ಲಿ ಹೇಳಿದಂತೆ ಡೆಪ್ತ್ ಆಫ್ ಫೀಲ್ಡ್ ಕೊರತೆಯಿಂದ ಹಿಂದಿರುವ ಮುಖ ಬ್ಲರ್‍ ಆದದ್ದೇ ಚಿತ್ರಕ್ಕೊಂದು ವಿಶೇಷ ನೋಟ ಕೊಟ್ಟಿದೆ. ಶಿವು ಹೇಳಿದಂತೆ ಇದು ನಾನೇನು ಶ್ರಮ ಪಟ್ಟು ತೆಗೆದ ಫೋಟೋ ಅಲ್ಲ..ಅಚಾನಕ್ ಆಗಿ ಸಿಕ್ಕ ಕ್ಷಣ ಅಷ್ಟೇ!

sunaath said...

ವೇಣು,
Blur ಆಗಿದ್ದರಿಂದಲೇ ಈ ಚಿತ್ರಕ್ಕೆ ಒಂದು ವಿಶೇಷ soft ಕಳೆ ಬಂದಿದೆ. ಫೋಟೋ sharp ಆಗಿದ್ದರೆ, ಈ effect
ಇರುತ್ತಿರಲಿಲ್ಲ.

chanakya said...

ಗೆಳೆಯಾ...ನೀನೊಬ್ಬ ಪಕ್ಕಾ ಫೋಟೋಗ್ರಾಫರ್.ಕೆಲವೊಮ್ಮೆ ಹೀಗಾಗುತ್ತೆ ಬೇಜಾರ್ ಮಾಡ್ಕೊಬೇಡ. ಅದ್ಕೆ ಹೇಳೋದು ಬ್ಲರ್ ನಲ್ಲೂ ಬ್ಯೂಟಿಯಿದೆ ಅಂತಾ...?