
ದೋಣಿಗಳಲ್ಲಿ ತೆರಳಿ ಮೀನುಗಾರಿಕೆ ನಡೆಸುವವರು ಕೆಲವರಾದರೆ ಹೀಗೇ ಮನೆ ಸಮೀಪ ಅದರಲ್ಲೂ ಕಡಲು ಮುನಿದಿರುವಾಗ ಸಪುರದ ನೂಲಿಗೆ ಹುಕ್ ಬಳಸಿ ಮೀನು ಹಿಡಿಯುವವರು ಹಲವರು. ಮಂಗಳೂರಿನ ಸಸಿಹಿತ್ಲು ಸಮೀಪ ನಂದಿನಿ ನದಿ ಕಡಲಿಗೆ ಸೇರುವಲ್ಲಿ ಹೀಗೇ ಮೀನುಗಾರನೊಬ್ಬ ಏಕಾಂಗಿಯಾಗಿ ಕಂಡುಬಂದಾಗ.....ಗಾಳಕ್ಕೆ ಸಿಕ್ಕ ಮೀನು ಹೇಗಿರಬಹುದು ಎಂಬ ಕುತೂಹಲ ನಮ್ಮಂತೆಯೇ ಇವರಿಗೂ ಇರಬಹುದೇನೋ !
6 comments:
photo baraha chennagide
ವೇಣು ಅವರೆ,
ನಿಮ್ಮ ಈ ಬ್ಲಾಗ್ ಗೆ ನಾ ಭೇಟಿಯನ್ನೇ ಕೊಟ್ಟಿರಲಿಲ್ಲ! :( ಅದ್ಭುತ ಪ್ರತಿಭೆ. ಚಿತ್ರಗಳು ತುಂಬಾ ಇಷ್ಟವಾದವು. ನಿಂತವನು ಮನುಷ್ಯನೋ ಇಲ್ಲಾ ಪ್ರತಿಮೆಯೋ ಎಂದೇ ಅನುಮಾನ!! :) "ನೀಲಿ ಮಳೆ" ಚಿತ್ರವಂತೂ ತುಂಬಾ ಇಷ್ಟವಾಯಿತು. ಈ ಚಿತ್ರವನ್ನು ನಾನು ನನ್ನ ಕವನವೊಂದಕ್ಕೆ ಬಳಸಿಕೊಳ್ಳಬಹುದೇ? ಚಿತ್ರ ನೋಡಿದ ಮೇಲೆ ಹುಟ್ಟಿತು ಕವನ :)
ಸಸಿಹಿತ್ಲು ಕಡಲ ತಡಿ ನನ್ನಿಷ್ಟದ ತಾಣ. ಇನ್ಯಾವ ಕಡಲ ತಡಿಯೂ ನನ್ನಷ್ಟು ಸೆಳೆದದ್ದಿಲ್ಲ. ಮತ್ತೆ ಆ ಜಾಗವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ಕಡಲು ಸದಾ ನಿತ್ಯ ನೂತನ. ರೋಮಾಂಚನ. ಇದರ ಬಗ್ಗೆ ಹಾಗೂ ಸಸಿಹಿತ್ಲುವಿನ ಬಗ್ಗೆ ನಾ ಹಿಂದೊಮ್ಮೆ ಬರೆದಿದ್ದೆ. ಇಷ್ಟವಾದರೆ, ಸಮಯಸಿಕ್ಕಾಗ ಓದಿ. ಲಿಂಕ್ ಇಲ್ಲಿದೆ..
http://manasa-hegde.blogspot.com/2008/01/blog-post_31.html
ಧನ್ಯವಾದಗಳು.
ಪ್ರಾಂಜಲೆ,
ಥ್ಯಾಂಕ್ಯೂ....
ತೇಜಸ್ವಿನಿಯವರೇ,
ನೀಲಿಮಳೆ ನನಗೂ ಫೇವರಿಟ್. ಅಂದಹಾಗೆ ನೀವು ಅದನ್ನು ಕವನಕ್ಕೆ ಬಳಸಿಕೊಳ್ಳುವುದು ಸಂತೋಷ.
ಸುಂದರ ಅತಿ ಸುಂದರ
ನಿಮ್ಮ ಛಾಯೆ ಬ್ಲಾಗ್ ಇಷ್ಟ ಆಯ್ತು. ಕಾರಣ ನಾನು ಛಾಯಾಗ್ರಾಹಕ.
ನಿಮ್ಮ ಕುತೂಹಲ ನನಗೂ ಕೊಡಿ. ಮೀನುಗಾರನ ಕಷ್ಟ ಹಾಗೂ ಚಿತ್ರ ಬಿಂಬಿಸಿದ್ದೀರಿ. thanks. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೆ ಕೆಲವು ಕುತೂಹಲಕಾರಿಯಾದ ಚಿತ್ರಗಳು ಹಾಗೂ ಬರಹಗಳನ್ನು ನೋಡಬಹುದು ಅನಿಸುತ್ತೆ. ಖುಷಿಯಾಗ್ತೀರ ಅನ್ನೋ ಭರವಸೆ ನನ್ನದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಮತ್ತೊಂದು ಆಶ್ಚರ್ಯಕ್ಕಾಗಿ:
http://camerahindhe.blogspot.com/
ನಾನಿಲ್ಲಿ ಪ್ರತಿಕ್ರಿಯಿಸುತ್ತಿರುವುದು ಈ ಚಿತ್ರಕ್ಕಲ್ಲ. ನಿಮ್ಮ ಇನ್ನೊಂದು ಬ್ಲಾಗಿನಲ್ಲಿರುವ ಎರಡು ಸಿನಿಮಾಗಳ ಬಗ್ಗೆ ನಾನು ಆ ಸಿನಿಮಾಗಳನ್ನು ನೋಡಬೇಕೆನಿಸಿದೆ. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು[ಆ ಬ್ಲಾಗಿನಲ್ಲಿ ಪ್ರತಿಕ್ರಿಯಿಸಲು ಸಾದ್ಯವಾಗಲಿಲ್ಲ]
ಶಿವು.ಕೆ.
Post a Comment