ಕೆಂಗುಲಾಬಿಯ ಚೆಲುವಿಗೆ ಈ ಮಿಡತೆ ಮಾರು ಹೋದಂತಿದೆ. ಮೋಡಮುಸುಕಿದ ವಾತಾವರಣದಿಂದ ಚಿತ್ರ ತಾಂತ್ರಿಕ ದೃಷ್ಟಿಯಿಂದ ಅಷ್ಟು ಚೆನ್ನಾಗಿ ಬಂದಿಲ್ಲ...ಆದರೆ ಪ್ರಕೃತಿಯಲ್ಲಿನ ವಿವಿಧ ಹಸಿರು ವರ್ಣವೈವಿಧ್ಯದೊಂದಿಗೆ ಈ ಮಿಡತೆಯ ವರ್ಣ ಮ್ಯಾಚಿಂಗ್ ಆಗುವಂತೆ ಕಂಡುಬಂತು
ಇತ್ತೀಚೆಗೆ ಬೆಳಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಯಾವುದೋ ಸ್ಟೇಷನ್ನಲ್ಲಿ ರೈಲು ನಿಂತಿತ್ತು. ಮಳೆ ಬರುತ್ತಿದ್ದರಿಂದ ಕಿಟಿಕಿಯಲ್ಲಿ ನೀರಿನ ಹನಿ. ಹಿನ್ನೆಲೆಯಲ್ಲಿ ಇನ್ನೊಂದು ರೈಲಿನ ಗಾಢ ನೀಲಿ ವರ್ಣ ಆಕರ್ಷಕವಾಗಿ ಕಂಡುಬಂತು. ಆಗ ಕ್ಲಿಕ್ಕಿಸಿದ ಫೋಟೋ ನಿಮ್ಮ ಮುಂದಿದೆ. ನಿಮಗೆ ಹೇಗನಿಸಿತು?