Monday, January 12, 2009

ಮುಖ ಬ್ಲರ್‍ ಆದರೇನು!!

ಮೊನ್ನೆ ಮೊನ್ನೆ ಕಾಲೇಜಿಗೆ ರಜೆಯಾದ್ದರಿಂದ ತಂಗಿ, ಅತ್ತಿಗೆ ಮನೆಗೆ ಬಂದಿದ್ರು...ಮನೆಗೆ ಬಂದವರಿಗೆ ಸುರತ್ಕಲ್ ಕಡಲತೀರ ನೋಡಲೇಬೇಕು! ಹಾಗೆ ಕಡಲಮುಂದೆ ಕುಂತಿದ್ದಾಗ ಫೋಟೋ ತೆಗೆಯುತ್ತಾ ಇದ್ದೆ. ಮನೆಯಲ್ಲಿ ಕಂಪ್ಯೂಟರಿಗೆ ಹಾಕಿದಾಗ ಈ ಫೋಟೋ ಗಮನ ಸೆಳೆಯಿತು. ಹಿಂದಿನ ಮುಖದ ಬದಲು ಫೋರ್‌ಗ್ರೌಂಡಲ್ಲಿರುವ ತಲೆಕೂದಲಿಗೆ ಲೆನ್ಸ್ ಫೋಕಸ್ ಆಗಿತ್ತು ಹಿಂದೆ ಬ್ಲರ್‍ ಆದ ಮುಖ...ವಿಶೇಷ ಚಿತ್ರವೇನೂ ಅಲ್ಲ, ಆದರೂ ಇಂಟರೆಸ್ಟಿಂಗ್ ಇರಬಹುದೇನೋ ಅಂತ ಹಾಕಿದ್ದೇನೆ.

Saturday, December 20, 2008

ಕೃಷಿ ಭೂಮಿ ಮಾರಾಟಕ್ಕಿದೆ!!!

ಕೃಷಿಯಲ್ಲಿ ಏನೇನೂ ಸುಖವಿಲ್ಲ ಎಂಬ ಮಾತು ಎಲ್ಲಿ ಹೋದರೂ ಬಿಡದು. ಕೃಷಿಕರನ್ನು ಕಾಡುವಷ್ಟು ಸಮಸ್ಯೆ ಬೇರೆ ಯಾರನ್ನೂ ಕಾಡದು...ಹಾಗಾಗಿ ಇದ್ದ ಜಾಗವನ್ನು ಮಾರಾಟ ಮಾಡಿ ನಗರಕ್ಕೆ ಹೋಗೋಣ ಎನ್ನುವುದು ಹಳ್ಳಿಗರದ್ದೂ ಯೋಚನೆ...ಇತ್ತೀಚೆಗೆ ಪಿರಿಯಪಟ್ಟಣ ಸಮೀಪ ಹೋಗುತ್ತಿದ್ದಾಗ ಹಸಿರು ಭೂಮಿಯೊಂದರಲ್ಲಿ ಕೆಂಪು ಅಕ್ಷರದಲ್ಲಿ ಹಾಕಿದ್ದ ಈ ಫಲಕ ಯಾಕೋ ಬಹಳ ನೋವು ತಂದಿತು.