Monday, December 27, 2010

Sunday, September 12, 2010

ಇಳೆಯೇ ಸ್ವರ್ಗ !


ಕಾಸರಗೋಡು ಜಿಲ್ಲೆಯ ಪೈವಳಿಕೆ ಸಮೀಪ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ, ಮುಂಜಾನೆ ಭೂರಮೆಯ ಮಂಜು ಮುಸುಕಿದಾಗ ಕಂಡು ಬಂದ ದೃಶ್ಯಗಳಿವು

Thursday, September 2, 2010

ಕೃಷ್ಣ








ಮಂಗಳೂರಿನ ಕದ್ರಿ ದೇವಳದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರಿಗೆ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರೀನ್‌ರೂಮ್‌ನಲ್ಲಿ ಮಿನಿ ಕೃಷ್ಣರಿಗೆ ಮೇಕಪ್‌ ನಡೆಯುತ್ತಿದ್ದಾಗ ಕಂಡುಬಂದ ಕೆಲ ಸನ್ನಿವೇಶಗಳು ಇಲ್ಲಿವೆ

Sunday, July 18, 2010

ಬೆತ್ತಲೆ ಜಗತ್ತು....

the bus completely bare, was rushing towards a garage near mangalore when i saw this and captured the moment(some post processing done)

Wednesday, June 23, 2010

ಬಿಸಿಯೂಟವಲ್ಲ ಹಸಿವೆಯಾಟ


ಈಚೆಗೆ ಶಾಲೆಯೊಂದಕ್ಕೆ ಹೋಗಿದ್ದೆ.ಸಂಜೆಯಾದ್ರೂ ಈ ಮಕ್ಕಳು ಊಟ ಮಾಡ್ತಾ ಇದ್ರು...ಶಿಕ್ಷಕಿಗೆ ಕೇಳಿದೆ...ಈ ಮಕ್ಕಳು ತೀರಾ ಬಡವರು, ಮನೆಗೆ ಹೋದ್ರೂ ತಿನ್ನೋಕೆ ಏನಿಲ್ಲ..ಹಾಗಾಗಿ ಶಾಲೆಯಲ್ಲಿ ಮಧ್ಯಾಹ್ನದ ಉಳಿದ ಬಿಸಿಯೂಟವನ್ನೇ ಉಳಿಸಿ ಅವರಿಗೆ ಸಂಜೆ ಬಡಿಸ್ತಾರೆ ಅನ್ನುವ ವಿಷಯ ಗೊತ್ತಾಯ್ತು...ತನ್ಮಯರಾಗಿ ಊಟ ಮಾಡುವ ಈ ಎಳೆಯ ಜೀವಗಳಲ್ಲಿ ಇನ್ನೂ ಜೀವನೋತ್ಸಾಹ ಇರುವುದೇ ಈ ಫೋಟೋಕ್ಕೆ ಕಾರಣವಾಯ್ತು

Saturday, June 5, 2010

ಕಲ್ಲಂಗಡಿ ಮಕ್ಕಳು


ಪಾರ್ಕೊಂದಕ್ಕೆ ಹೋದಾಗ ಕಲ್ಲಂಗಡಿ ಹಣ್ಣು ತಿಂತಿದ್ದ ಈ ಮಕ್ಕಳ ಪೋಸ್ ಇಷ್ಟ ಆಯ್ತು...ಹಾಗೆ ಕ್ಲಿಕ್ಕಿಸಿದಾಗ....

Thursday, January 28, 2010

ಸ್ವರ್ಗಕ್ಕೆ ದಾರಿ !


ಕುದುರೆಮುಖಕ್ಕೆ ಹೋಗುವಾಗ ಸಿಗುವ ದಾರಿಯಿದು. ಬೋಳುಗುಡ್ಡಗಳು, ಇಕ್ಕೆಲಗಳಲ್ಲಿ ಶೋಲಾಕಾಡು, ನಡುವೆ ಸಾಗುವ ದಾರಿ...ಬಿಸಿಲು ನೆರಳಿನ ಆಟ ಕಂಡುಬಂದಿದ್ದು ಹೀಗೆ...

Wednesday, January 6, 2010

ಭತ್ತ ಬಿಡಿಸುವುದು


ಇದು ನನಗಂತೂ ಬಹಳ ಅಪರೂಪದ ದೃಶ್ಯ! ಸಾಮಾನ್ಯವಾಗಿ ಭತ್ತ ಬಿಡಿಸುವ ಹಳೆಯ ತಂತ್ರವಿದು. ದನಗಳನ್ನು ಸಾಲಾಗಿ ಕಟ್ಟಿ ಭತ್ತದ ಒಣ ತೆನೆಗಳ ಮೇಲೆ ಹಾಯಿಸುವುದು. ಆಗ ಭತ್ತ ಕೆಳಗೆ ಬೀಳುವುದು, ಅದನ್ನೇ ನಂತರ ಸಂಗ್ರಹಿಸುವುದು...ಮೊನ್ನೆ ಚಾರಣ ಹೋಗಿದ್ದಾಗ ಕುದುರೆಮುಖ ಸಮೀಪದ ಸಂಸೆ ಬಳಿ ಕಂಡು ಬಂದ ಸನ್ನಿವೇಶವಿದು....