Sunday, December 20, 2009

ನಮ್ಮ ಕಷ್ಟ ನಮಗ್ಗೊತ್ತು!

ಬಂಟ್ವಾಳದ ಗ್ರಾಮವೊಂದರಲ್ಲಿ ತಮ್ಮ ಕಾಲೊನಿಗೆ ಮಾರ್ಗ ನಿರ್ಮಿಸಲು ಮಹಿಳೆಯರೇ ಮುಂದಾದರು...ಆ ಬಗ್ಗೆ ಲೇಖನ ಮಾಡಲು ಹೋಗಿದ್ದೆ. ಆಗ ಕ್ಲಿಕ್ಕಿಸಿದ ಚಿತ್ರಗಳಲ್ಲೊಂದು ಇಲ್ಲಿದೆ. ೩೫ ಮಹಿಳೆಯರು, ಅವರಿಗೆ ನೆರವಾಗಲು ೧೩ ಪುರುಷರು ಸೇರಿಕೊಂಡು ಬಲ್ಲೆಕೋಡಿ ಎಂಬಲ್ಲಿ ರಸ್ತೆ ನಿರ್ಮಿಸಿದರು...

Wednesday, October 14, 2009

ಕ್ಯಾಬೇಜ್ ಫ್ರೈ


ಬೆಳಗ್ಗೆ ಚಪಾತಿಗೆಂದು ಅಮ್ಮ ಬಾಣಲೆಯಲ್ಲಿ ಕ್ಯಾಬೇಜ್ ಪಲ್ಯ ಇರಿಸಿದ್ದರು. ತಿನ್ನುವ ಮೊದಲು ಹೀಗೊಂದು ಚಿತ್ರ ತೆಗೆಯೋಣ ಅನ್ನಿಸಿತು. ಬಾಣಲೆಯ ಕೈಗಷ್ಟೇ ಫೋಕಸ್ ಮಾಡಿ ಉಳಿದದ್ದನ್ನು ಉದ್ದೇಶಪೂರ್ವಕ ಬ್ಲರ‍್ ಮಾಡಲಾಗಿದೆ....ಒಂಥರಾ abstract photo ಎಂದರೂ ಅಡ್ಡಿಯಿಲ್ಲ...

Tuesday, October 6, 2009
















































ಫೋಟೋಗ್ರಫಿಯಲ್ಲಿ ಸ್ಟ್ರೀಟ್ ಫೋಟೋಗ್ರಫಿಗೆ ಅದರದ್ದೇ ಆದ ಮಹತ್ವ ಇದೆ. ಹೊಸ ಸ್ಥಳಗಳಿಗೆ ಹೋದಾಗ, ನಿಮ್ಮದೇ ಸ್ಥಳದಲ್ಲಿ ತಿರುಗುವಾಗ, ಮಾರ್ಕೆಟ್ ಸುತ್ತು ಹಾಕುವಾಗ ನಿಮ್ಮಲ್ಲಿ ವಿಶೇಷತೆ, ವಿಶೇಷ ಕೋನ ಗ್ರಹಿಸುವ ಕಂಗಳಿದ್ದರೆ ಸ್ಟ್ರೀಟ್ ಫೋಟೋಗ್ರಫಿ ಸುಲಭ. ಇತ್ತೀಚೆಗೆ ಹಂಪಿ, ಬಿಜಾಪುರ ಪ್ರವಾಸ ಹೋಗಿದ್ದಾಗ ಹೀಗೇ ಕ್ಲಿಕ್ಕಿಸಿದ ಕೆಲ ಅಂತಹ ಫೋಟೋಗಳು ಇಲ್ಲಿವೆ...ಹೇಗನಿಸಿತು ಹೇಳಿ...

Monday, August 3, 2009

ಕೆಂಪು ಕೆನ್ನೆಗೂದಲಿನ ಬುಲ್ ಬುಲ್(red whiskered bulbul)







ಮನೆ ಮುಂದಿನ ಪಪ್ಪಾಯಿ ಮೇಲೊಂದು ಕಣ್ಣಿರಿಸಿದ್ದ ಈ ಬುಲ್‌ಬುಲ್‌ ಹಣ್ಣಾಗುವುದನ್ನು ಕಾಯುತ್ತಲೇ ಇತ್ತು...ನಾನೂ ಆ ಹಣ್ಣಿಗಾಗಿ ಬರುವ ಹಕ್ಕಿಗಳಿಗೆ ಕಾಯುತ್ತಲೇ ಇದ್ದೆ !

ಬಲೆ ಮೀನಿಗಲ್ಲ....

ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳಲ್ಲಿ ತೇಲಿ ಬರುವ ಅಡಕೆ, ತೆಂಗಿನಕಾಯಿ ಹಿಡಿಯುವುದಕ್ಕೆ ದಕ್ಷಿಣ ಕನ್ನಡದ ಗ್ರಾಮಸ್ಥರು ಕಂಡುಕೊಂಡ ವಿಧಾನವಿದು. ಜಿಲ್ಲೆಯ ಹಳ್ಳಿಗಳಿಗೆ ತೆರಳಿದರೆ ಹೀಗೆ ಬಿದಿರಿಗೆ ಬುಟ್ಟಿಕಟ್ಟಿ ತೆಂಗು ಅಡಕೆ ಹಿಡಿಯುತ್ತಿರುತ್ತಾರೆ. ಮಳೆಗಾಲದಲ್ಲಿ ಕೆಲಸ ಕಡಮೆ ಇರುವಾಗ ಹೊಟ್ಟೆಪಾಡಿಗೆ ಒಂದು ಮೂಲವೂ ಆಗುತ್ತದೆ. ಇತ್ತೀಚೆಗೆ ಸುಬ್ರಹ್ಮಣ್ಯ ಕಡೆಗೆ ಹೋಗಿದ್ದಾಗ ಸಿಕ್ಕ ಚಿತ್ರವಿದು

Thursday, July 23, 2009

ಅಜ್ಜಜ್ಜಿ !


ಈ ಗಟ್ಟಿಗಿತ್ತಿ ಅಜ್ಜಿ ಸಿಕ್ಕಿದ್ದು ಮೊನ್ನೆ ಬಾಂಜಾರಮಲೆಗೆ ಚಾರಣ ಹೋದಾಗ. ಅಲ್ಲಿನ ಮಲೆಕುಡಿಯ ಜನಾಂಗದ ಈ ಅಜ್ಜಿಗೀಗ ಸುಮಾರು ೯೦ ವರುಷವಂತೆ..ಹೇಗಿದಾರೆ ಹೇಳಿ !

Wednesday, June 10, 2009

ಕಾಡಿನಿಂದ ನಾಡಿಗೆ

ಈ ಅಜ್ಜ ಕಾಣಸಿಕ್ಕಿದ್ದು ಕೆಲ ತಿಂಗಳ ಮೊದಲು ಕುದುರೆಮುಖಕ್ಕೆ ಚಾರಣ ಹೋಗುವ ದಾರಿಯಲ್ಲಿ. ನಾವು ಕಾಡಿನತ್ತ ತೆರಳುವಾಗ, ಈ ತಾತ ಕಾಡಿನಿಂದ ಉರುವಲು ಹಿಡಿದು ಮನೆಗೆ ಮರಳುತ್ತಿದ್ದರು

Wednesday, May 6, 2009

oriental magpie robin







ಸಾಮಾನ್ಯವಾಗಿ ನಮ್ಮ ಮನೆ ಸುತ್ತ ಮುತ್ತ ಮರಗಳಲ್ಲಿ ಕಾಣಸಿಗುವ ಹಕ್ಕಿ ಇದು. ಇದರ ಹೆಸರು oriental magpie robin. ಒಂದು ಬೆಳಗ್ಗೆ ಅದು ಹೇಗೋ ಕಷ್ಟಪಟ್ಟು ಸೆರೆಹಿಡಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ...

Thursday, April 30, 2009

ತಳ್ಳು ದೋಣಿ ಐಸಾ


ಸಮುದ್ರತೀರ ಸದಾ ಚಟುವಟಿಕೆಯ ಕೇಂದ್ರ...ಸುರತ್ಕಲ್ ಬೀಚಲ್ಲಿ ಇತ್ತೀಚೆಗೆ ಮೀನುಗಾರರು ದೋಣಿ ಎಳೆಯುವ ದೃಶ್ಯ ಸಿಕ್ಕಿತು..ಜತೆಗೆ ಕಾಗೆಗಳ ಹಾರಾಟ ಈ ಫ್ರೇಮ್‌ಗೆ ಸಿಕ್ಕ ಬೋನಸ್ !

Thursday, March 12, 2009




ಅಮೇರಿಕಾ, ಯುರೋಪ್ ದೇಶಗಳಲ್ಲಿ ಕಂಡುಬರುವ ಈ ರೀತಿಯ ‘ಆಟಂ ಲೀವ್ಸ್’ ಕಂಡುಬಂದಿದ್ದು ಊಟಿಯ ಬೊಟಾನಿಕಲ್ ಗಾರ್ಡನ್‌ನಲ್ಲಿ...

Thursday, February 19, 2009

ಕೆಂಬೂತದ ಸ್ಕೆಚ್ !












ಮೊನ್ನೆ ಬೆಳಗ್ಗೆ ಎದ್ದು ಕಾಂಪೌಂಡ್ ಬಳಿ ಸುತ್ತಾಡುವಾಗ ಕಣ್ಣಿಗೆ ಬಂದದ್ದು ಈ ಅತಿಥಿ. ಕಾಂಪೌಂಡ್ ಮೇಲೊಮ್ಮೆ, ಪಕ್ಕದ ಮುಳ್ಳಿನ ಪೊದೆಯ ಮೇಲೊಮ್ಮೆ ಕುಳಿತು ‘ಸ್ಕೆಚ್’ ಹಾಕುತ್ತಿದ್ದರು ಈ ಕೆಂಬೂತ ಸಾಹೇಬ್ರು! ಸಾಮಾನ್ಯವಾಗಿ ಹಲ್ಲಿ, ಹುಳ, ಇತರ ಹಕ್ಕಿಗಳ ಮೊಟ್ಟೆ ಈ ಕೆಂಬೂತ ಅಲಿಯಾಸ್ Greater Coucal ಎಂಬ ಕಾಗೆ ವರ್ಗದ ಪಕ್ಷಿಯ ಆಹಾರಗಳು. ನಾವು ಚಿಕ್ಕವರಿದ್ದಾಗಲೇ ಈ ಹಕ್ಕಿಯ ಬಗ್ಗೆ ಒಂಥರಾ ಭಯ, ಭಕ್ತಿ. ಈ ಹಕ್ಕಿ ಮರದಿಂದ ಮರಕ್ಕೆ ಹಾರುವುದು ಅಪರೂಪವಂತೆ..ನೆಲದ ಮೇಲೆ ಓಡಾಡುತ್ತಾ ಆಹಾರ ಸಂಗ್ರಹಿಸುವ ಇದು ನಾನ್ ವೆಜಿಟೇರಿಯನ್. ಇಂತಿಪ್ಪ ಕೆಂಬೂತದ ಕೆಲ ಭಂಗಿಗಳು ನಿಮ್ಮ ಮುಂದೆ



Monday, January 12, 2009

ಮುಖ ಬ್ಲರ್‍ ಆದರೇನು!!

ಮೊನ್ನೆ ಮೊನ್ನೆ ಕಾಲೇಜಿಗೆ ರಜೆಯಾದ್ದರಿಂದ ತಂಗಿ, ಅತ್ತಿಗೆ ಮನೆಗೆ ಬಂದಿದ್ರು...ಮನೆಗೆ ಬಂದವರಿಗೆ ಸುರತ್ಕಲ್ ಕಡಲತೀರ ನೋಡಲೇಬೇಕು! ಹಾಗೆ ಕಡಲಮುಂದೆ ಕುಂತಿದ್ದಾಗ ಫೋಟೋ ತೆಗೆಯುತ್ತಾ ಇದ್ದೆ. ಮನೆಯಲ್ಲಿ ಕಂಪ್ಯೂಟರಿಗೆ ಹಾಕಿದಾಗ ಈ ಫೋಟೋ ಗಮನ ಸೆಳೆಯಿತು. ಹಿಂದಿನ ಮುಖದ ಬದಲು ಫೋರ್‌ಗ್ರೌಂಡಲ್ಲಿರುವ ತಲೆಕೂದಲಿಗೆ ಲೆನ್ಸ್ ಫೋಕಸ್ ಆಗಿತ್ತು ಹಿಂದೆ ಬ್ಲರ್‍ ಆದ ಮುಖ...ವಿಶೇಷ ಚಿತ್ರವೇನೂ ಅಲ್ಲ, ಆದರೂ ಇಂಟರೆಸ್ಟಿಂಗ್ ಇರಬಹುದೇನೋ ಅಂತ ಹಾಕಿದ್ದೇನೆ.