Saturday, November 22, 2008

ಒಂದು ಸಂಜೆ ಕಡಲತೀರ ಯಾನ








ಕಡಲತೀರಗಳೆಂದರೆ ಸದಾ ನನಗೆ ಆಕರ್ಷಣೆ. ಸುಮ್ಮನೆ ನಮ್ಮೂರ ಬೀಚುಗಳಿಗೆ ಹೋಗಿ ಸಂಜೆಯಾಗುತ್ತಲೇ ಅವುಗಳು ತೆರೆದುಕೊಳ್ಳುವ ಚಟುವಟಿಕೆ ಗಮನಿಸುತ್ತಿದ್ದರೆ ಎಂತಹ ಒತ್ತಡವೂ ದೂರವಾಗಲೇಬೇಕು...ಮೊನ್ನೆ ನಮ್ಮೂರ ಸುರತ್ಕಲ್ ಬೀಚಿಗೆ ಹೋಗಿದ್ದೆ. ಹೆಗಲಲ್ಲಿ ಕ್ಯಾಮೆರಾ ಕೂಡಾ ಇತ್ತು. ಮೋಡ ಕವಿದಿದ್ದ ಕಾರಣ ಯಾವ ಫೋಟೋ ಸಿಗದೆಂಬ ಗ್ಯಾರಂಟಿಯಿತ್ತು. ಆದರೂ ಸೂರ್ಯ ಇನ್ನೇನು ಕಡಲಿಗೆ ಜೊಂಯ್ಯೆಂದು ಮುಳುಗಬೇಕು ಎಂದಿರುವಾಗಲೇ ಆಗಸಕ್ಕೊಂದು ವಿಚಿತ್ರ ಬಣ್ಣ ಬಂತು. ಮುಂದೆ ಕೆಲ ಸರಕಿನ ಹಡಗುಗಳು ಸಾಗುತ್ತಿದ್ದವು. ಕ್ಯಾಮೆರಾ ಲೆನ್ಸ್ ಪೂರ್ತಿ ಟೆಲಿಫೋಟೋ ಮೋಡ್‌ಗೆ ಇರಿಸಿ ಒಂದಿಷ್ಟು ಕ್ಲಿಕ್ಕಿಸಿದೆ. ಫಲಿತಾಂಶ ನಿಮ್ಮ ಮುಂದಿದೆ(ಇಲ್ಲಿ ಸಿಕ್ಕ ವರ್ಣಗಳು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿದ್ದಲ್ಲ. ಒರಿಜಿನಲ್)

Thursday, November 6, 2008

ಗಿಳಿವಿಂಡಿನ ಜಂಭದ ಸದಸ್ಯರು








ಹಕ್ಕಿಗಳ ಫೋಟೋ ತೆಗೆಯುವಲ್ಲಿ ನಾನು ಎಡವಿದ್ದೇ ಜಾಸ್ತಿ...ಹಕ್ಕಿಗಳ ಚೆನ್ನಾದ ಫೋಟೋ ತೆಗೆಯುವುದಕ್ಕೆ ಎಸ್‌ಎಲ್‌ಆರ್‍ ಕ್ಯಾಮೆರಾ ಜತೆಗೆ ಕನಿಷ್ಠ ೩೦೦ ಎಂ.ಎಂ ಟೆಲಿಫೋಟೋ ಲೆನ್ಸ್ ಅತಿ ಅಗತ್ಯ. ನನ್ನ ಬಳಿ ಇರುವುದು ಪ್ರೊಫೆಷನಲ್ ಕ್ಯಾಮೆರಾ ಅಲ್ಲ. ೧೨ ಎಕ್ಸ್ ಝೂಮ್ ಲೆನ್ಸ್‌ ಅದರಲ್ಲಿದೆ, ಆದರೂ ಎಸ್‌ಎಲ್‌ಆರ್‍ ಲೆನ್ಸ್‌ನಷ್ಟು ಸ್ಪಷ್ಟವಾಗಿ ಬಿಂಬ ಮೂಡುವುದಿಲ್ಲ.
ಇರಲಿ...ಹಾಗಿದ್ದರೂ ನಾನು ಸ್ವಲ್ಪವಾದರೂ ಖುಷಿಪಟ್ಟಿರುವ ಕೆಲ ಫೋಟೋಗಳು ಇಲ್ಲಿವೆ.
ಪೈರು ತಿನ್ನಲು ಆಗಮಿಸಿದ್ದ ಗಿಳಿವಿಂಡಿನ ಕೆಲಸದಸ್ಯರು ಸಿಕ್ಕಿದ್ದು ಮಡಿಕೇರಿ ಬಳಿಯ ಸಿದ್ದಾಪುರಕ್ಕೆ ಹೋಗಿದ್ದಾಗ. ..