Saturday, November 22, 2008

ಒಂದು ಸಂಜೆ ಕಡಲತೀರ ಯಾನ








ಕಡಲತೀರಗಳೆಂದರೆ ಸದಾ ನನಗೆ ಆಕರ್ಷಣೆ. ಸುಮ್ಮನೆ ನಮ್ಮೂರ ಬೀಚುಗಳಿಗೆ ಹೋಗಿ ಸಂಜೆಯಾಗುತ್ತಲೇ ಅವುಗಳು ತೆರೆದುಕೊಳ್ಳುವ ಚಟುವಟಿಕೆ ಗಮನಿಸುತ್ತಿದ್ದರೆ ಎಂತಹ ಒತ್ತಡವೂ ದೂರವಾಗಲೇಬೇಕು...ಮೊನ್ನೆ ನಮ್ಮೂರ ಸುರತ್ಕಲ್ ಬೀಚಿಗೆ ಹೋಗಿದ್ದೆ. ಹೆಗಲಲ್ಲಿ ಕ್ಯಾಮೆರಾ ಕೂಡಾ ಇತ್ತು. ಮೋಡ ಕವಿದಿದ್ದ ಕಾರಣ ಯಾವ ಫೋಟೋ ಸಿಗದೆಂಬ ಗ್ಯಾರಂಟಿಯಿತ್ತು. ಆದರೂ ಸೂರ್ಯ ಇನ್ನೇನು ಕಡಲಿಗೆ ಜೊಂಯ್ಯೆಂದು ಮುಳುಗಬೇಕು ಎಂದಿರುವಾಗಲೇ ಆಗಸಕ್ಕೊಂದು ವಿಚಿತ್ರ ಬಣ್ಣ ಬಂತು. ಮುಂದೆ ಕೆಲ ಸರಕಿನ ಹಡಗುಗಳು ಸಾಗುತ್ತಿದ್ದವು. ಕ್ಯಾಮೆರಾ ಲೆನ್ಸ್ ಪೂರ್ತಿ ಟೆಲಿಫೋಟೋ ಮೋಡ್‌ಗೆ ಇರಿಸಿ ಒಂದಿಷ್ಟು ಕ್ಲಿಕ್ಕಿಸಿದೆ. ಫಲಿತಾಂಶ ನಿಮ್ಮ ಮುಂದಿದೆ(ಇಲ್ಲಿ ಸಿಕ್ಕ ವರ್ಣಗಳು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿದ್ದಲ್ಲ. ಒರಿಜಿನಲ್)

5 comments:

Ittigecement said...

great photos!!

KRISHNA said...

ಅನಿರೀಕ್ಷಿತ ಫೋಟೋಗಳು ಅನ್ನಿಸೋದೇ ಇಲ್ಲ. ತುಂಬಾ ಚೆನ್ನಾಗಿವೆ... ಕಂಪೋಸಿಷನ್ ಕೂಡಾ

shivu.k said...

ವೇಣು,

ನಿಮ್ಮ ಬ್ಲಾಗಿನಲ್ಲಿ ಅಪರೂಪಕ್ಕೊಮ್ಮೆ ಸುಂದರ ಫೋಟೊ ನೋಡಿದೆ. ತುಂಬಾ ಚೆನ್ನಾಗಿದೆ. ನೋಡುತ್ತಿದ್ದರೆ ಭಾವಾನಾತ್ಮಕವಾಗಿಯೂ ಇದೆ. ಮುಂದುವರಿಸಿ....

Anonymous said...

wow!

Greeshma said...

super!